Monday, 26 February 2018

ನಮ್ಮ ಮನೆಯಲ್ಲಿಂದು tasty ಮಲೆನಾಡ ಶೈಲಿಯ ಹಲಸಿನ ಕಾಯಿ ಹುಳಿ...

ಬಹಳಷ್ಟು ಜನರಿಗೆ ಪರಿಚಯ ಇರುವುದು, ಹಲಸಿನ ಹಣ್ಣು, ಬೀಜ ಮಾತ್ರ. ಕೆಲವರು ಕಾಯಿ ಉಪಯೋಗಿಸ ಬಹುದು. ಆದರೆ, ಮಲೆನಾಡಿನ ಜನರು, ಹಲಸಿನ ಕಾಯಿಯ ಹುಟ್ಟಿನಿಂದ ಹಿಡಿದು, ಬಲಿಯುವಿಕೆಯವರೆಗೆ, ಪ್ರತಿ ಹಂತದಲ್ಲಿಯೂ ಬೇರೆ ಬೇರೆ ರೀತಿಯ ಖಾದ್ಯ ಗಳನ್ನ ತಯಾರಿಸುತ್ತಾರೆ.

ಎಳೆ ಕಾಯಿಯ ತರಹೇವಾರಿ ಹುಳಿ, ಹಲವು ಬಗೆಯ ಗೊಜ್ಜು, ಕರಿದ ತಿಂಡಿಗಳು(ಚಿಪ್ಸ್), ಹಪ್ಪಳ, ಕಷಾಯ, ಹಲವು ಬಗೆಯ ಬೋಂಡ, ಬಜ್ಜಿ...ಅಬ್ಬ... List is never ending.

ಹಾಗೆ ಹಣ್ಣಿನಲ್ಲೂ ಹಲವು ರೀತಿಯ ಖಾದ್ಯ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಪಾಯಸ, ಹೋಳಿಗೆ, ಸಿಹಿ ಗೊಜ್ಜು ಇತ್ಯಾದಿ ಇತ್ಯಾದಿ... ಈಗೀಗ ಹಲಸಿನ ಹಣ್ಣಿನ ice cream ಕೂಡ famousಉ.

ಮಲೆನಾಡಿನ ಜನ, ಇದರ ಎಸಳುಗಳನ್ನ ಉದ್ದನೆಯದಾಗಿ ಕತ್ತರಿಸಿ ಉಪ್ಪು ನೀರಿನಲ್ಲಿ ಮುಳುಗಿಸಿಟ್ಟು ತಿಂಗಳಾನುಗಟ್ಟಲೆ ಇಟ್ಟು ಉಪಯೋಗಿಸುತ್ತಾರೆ.

Master chef ತರಹದ ಕಾರ್ಯಗಳ creativity in cooking ನಿಂದಾಗಿ, ಈಗೀಗ, pasta ಮತ್ತು pizzaಗಳಲ್ಲೂ ಉಪಯೋಗಿಸುವ ವರಸೆ ಶುರುವಾಗಿದೆ. ಅದು ಹೇಗಿರತ್ತೋ ನಂಗಂತೂ ಗೊತ್ತಿಲ್ಲಪ್ಪ...

ಆದರೆ, ಇದರ ಬೀಜ ಸುಟ್ಟು ತಿನ್ನೋದೆ ನನಗೆ favorite..




ನಮಗೆಲ್ಲ ತೆಂಗಿನ ಮರ ಕಾಮಧೇನುವಾದರೆ, ಮಲೆನಾಡ ಜನರಿಗೆ ಹಲಸು ಕಾಮಧೇನು.... ಮರದ ತೊಗಟು, ಎಲೆಯಿಂದ ಹಿಡಿದು, ಭಾಗಶಃ ತನ್ನನ್ನು ತಾನೇ ಮಾನವನ ಸೇವೆಗೆ ಅರ್ಪಿಸಿಕೊಂಡಿದೆ ಈ ವೃಕ್ಷ.




No comments:

Post a Comment